ಬರ್ಲಿನ್ ಕನ್ನಡ ಶಾಲೆ – ಉದ್ಘಾಟನಾ ಸಮಾರಂಭ
ಬರ್ಲಿನ್ ಕನ್ನಡ ಬಳಗ (ಇ.ವಿ)ವು , ಬರ್ಲಿನ್ ಪ್ರದೇಶದ ಕನ್ನಡಿಗ ಕುಟುಂಬಗಳ ಮಕ್ಕಳಿಗಾಗಿ ಕನ್ನಡ ತರಗತಿಗಳನ್ನು ಪ್ರಾರಂಭಿಸುತ್ತಿದೆ. ಮಾತೃ ಭಾಷೆ ಕನ್ನಡವನ್ನು ಕಲಿಸುವುದು, ಮಕ್ಕಳಿಗೆ ತಮ್ಮ ಅಸ್ತಿತ್ವದ ಬೇರುಗಳ ಪರಿಚಯ ಅದರ ಜೊತೆಗೆ ಸಂಪರ್ಕ ಕಲ್ಪಿಸುವುದು ಮತ್ತು ನಮ್ಮ ಭಾಷೆಯನ್ನು ಮುಂದಿನ ತಲೆಮಾರಿಗೆ ತಲುಪಿಸುವುದು ಹಾಗು ನಮ್ಮ ಭಾಷೆಯನ್ನು ಹರಡುವ ಉದ್ದೇಶವನ್ನು ಹೊಂದಿದ್ದೇವೆ.
ಕನ್ನಡ ಭಾಷೆಯನ್ನು ಕಲಿಯಲು ಬಯಸುವ ಎಲ್ಲರಿಗೂ ತರಗತಿಗಳು ಮುಕ್ತವಾಗಿದ್ದು, ಕನ್ನಡಿಗರಿಗಷ್ಟೇ ಅಲ್ಲದೆ ಕನ್ನಡೇತರರಿಗೂ ಕಲಿಯುವ ಅವಕಾಶ ಕಲ್ಪಿಸಲಾಗಿದೆ. ಈಗಾಗಲೇ ಕೆಲವು ಜರ್ಮನ್ನರು ಆಸಕ್ತಿಯಿಂದ
ನೊಂದಾಯಿತರಾಗಿರುವುದನ್ನು ಉಲ್ಲೇಖಿಸಲು ಬಯಸುತ್ತೇವೆ
Berlin Kannada School – Opening Ceremony
The Berlin Kannada Institute (EV) is launching Kannada classes for children of mirror families in Berlin. We intend to teach the mother tongue Kannada, introduce the children to their roots of existence and to transmit our language to the next generation and spread our language.
Classes are open to all those who want to learn Kannada, not only Kannadigars but also non-Kannada learners. Already with some Germans interested
We would like to mention being registered
Catch on Facebook